Posts

Showing posts from May, 2022

ಲೇಬರ್ ಕಾಂಟ್ರಾಕ್ಟರ್ ವೇಷದಲ್ಲಿದ್ದಾರೆ ವಂಚಕರು, ಎಚ್ಚರವಹಿಸಿ!

Image
ಮಂಗಳೂರು ಸೇರಿದಂತೆ ಕರ್ಣಾಟಕದಲ್ಲಿ ಕಾರ್ಮಿಕ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕಾರ್ಮಿಕರ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ಲಕ್ಷಾಂತರ ರುಪಾಯಿಗಳನ್ನು ವಂಚಿಸುವ ಜಾಲಗಳು ಹುಟ್ಟಿಕೊಂಡಿವೆ. ಇಂತಹ ವಂಚನೆಗೆ ಸಿಲುಕಿ ರಮೇಶ್ ಲಾಯದಗುಂಡಿ ಎಂಬುವವರು ಸುಮಾರು ಒಂದೂವರೆ ಲಕ್ಷ ರುಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಬಾದಾಮಿ ಜಿಲ್ಲೆಯವರಾದ ರಮೇಶ ಲಾಯದಗುಂಡಿ ಎಂಬವರು ಮಂಗಳೂರಿನಲ್ಲಿ ಗೇಲ್ ಗ್ಯಾಸ್ ಪೈಪ್'ಲೈನ್ ಹಾಕಲು ಗುಂಡಿ ತೋಡುವ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದು, ಚಿತ್ರದುರ್ಗ ನಿವಾಸಿಯಾದ ನಾಗರಾಜ್ ಎಂಬವರಿಗೆ ಈ ಕೆಲಸವನ್ನು ಲೇಬರ್ ಕಾಂಟ್ರಾಕ್ಟ್ ಮೇಲೆ ಕೊಟ್ಟಿದ್ದರು. ನಾಗರಾಜ್ ಎಂಬಾತನು ತನ್ನನ್ನು ಲೇಬರ್ ಕಾಂಟ್ರಾಕ್ಟರ್ ಎಂದು ಪರಿಚಯಿಸಿಕೊಂಡಿದ್ದು ತನ್ನ ಬಳಿ 30 ಜನ ಕೆಲಸಗಾರರು ಇರುವುದಾಗಿ ಹೇಳಿ ರಮೇಶ್ ಅವರನ್ನು ನಂಬಿಸಿ, ಇನ್ನೂ ಹೆಚ್ಚು ಮಂದಿ ಕೆಲಸಗಾರರನ್ನು ಕರೆತರುವುದಾಗಿ ಹೇಳಿ ಅವರಿಂದ ರುಪಾಯಿ 1,50,000/- ವನ್ನು ಅಡ್ವಾನ್ಸ್ ಮೊತ್ತವಾಗಿ ಪಡೆದುಕೊಂಡಿರುತ್ತಾನೆ. ಮೂರು ದಿನ ಹತ್ತು ಕೆಲಸಗಾರರನ್ನು ಇಟ್ಟುಕೊಂಡು ಅಲ್ಪ-ಸ್ವಲ್ಪ ಕೆಲಸ ಮಾಡಿ, ಎಪ್ರಿಲ್ ಇಪ್ಪತ್ತು ಮುಂಜಾನೆಯಂದು ತನ್ನ ಹೆಂಡತಿ, ಮಕ್ಕಳು ಹಾಗೂ ಇತರ ಕೆಲಸಗಾರರೊಂದಿಗೆ ಕೂಳೂರು ಸಮೀಪದಲ್ಲಿ ಅವರಿಗೆ ನೀಡಲಾಗಿದ್ದ ವಾಸಸ್ಥಾನದಿಂದ ಪರಾರಿಯಾಗಿರುತ್ತಾನೆ. ಆ ಬಳಿಕ ಹಲವು ದಿನಗಳ ಕಾಲ ...